‘ಚುನಾವಣೆ- ನಾವೇ ಹೊಣೆ’ ಬೀದಿ ನಾಟಕ ಪ್ರದರ್ಶನ; ಮತದಾನ ಜಾಗೃತಿ

SDM College (Autonomous), Ujire

news

Extension Activity

ಉಜಿರೆ, ಮೇ 8: ವಿಧಾನಸಭೆ ಚುನಾವಣೆ ನಡೆಯಲಿರುವ (ಮೇ 10) ಹಿನ್ನೆಲೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಒಳಾಂಗಣದಲ್ಲಿ ಸೋಮವಾರ ಎನ್ನೆಸ್ಸೆಸ್ ಸ್ವಯಂಸೇವಕರು ‘ಚುನಾವಣೆ- ನಾವೇ ಹೊಣೆ’ ಬೀದಿ ನಾಟಕದ ಮೂಲಕ ಮತದಾನದ ಕುರಿತು ಜಾಗೃತಿ ಮೂಡಿಸಿದರು.

 

ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ (IQAC), ರಾಷ್ಟ್ರೀಯ ಸೇವಾ ಯೋಜನೆ (NSS) ಹಾಗೂ ಸಾಮಾಜಿಕ ಜವಾಬ್ದಾರಿಗಳ ಉಪಕ್ರಮಗಳ ಸಮಿತಿ (SRIC) ಜಂಟಿ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು. 

 

'ಚುನಾವಣೆ- ನಾವೇ ಹೊಣೆಬೀದಿ ನಾಟಕದ ಒಂದು ದೃಶ್ಯ. 

 

ಮತವನ್ನು ಕರವಸ್ತ್ರದಂತೆ ಬಳಸದೆ, ಒಂದು ಅಸ್ತ್ರದ ರೀತಿಯಲ್ಲಿ ಬಳಸಬೇಕು, ಆಮಿಷಗಳಿಗೆ ಬಲಿಯಾಗದೆ, ವಿವೇಚಿಸಿ ಮತ ಚಲಾಯಿಸಬೇಕು, ಮತದಾನವೆಂಬುದು ವ್ಯವಹಾರದಂತಾಗದೆ ಸಮಸ್ಯೆಗಳಿಗೆ ಪರಿಹಾರವೆಂಬಂತಾಗಬೇಕು, ಪ್ರತಿಯೊಂದು ಮತವೂ ಅಮೂಲ್ಯ ಹಾಗೂ ನಿರ್ಣಾಯಕವಾಗಿದ್ದು, ಮರೆಯದೆ ಮತದಾನದ ಹಕ್ಕನ್ನು ಚಲಾಯಿಸಬೇಕು ಎಂಬ ಸಂದೇಶವನ್ನು ನಾಟಕ ನೀಡಿತು.

 

 

 

ಈ ಮೊದಲು ಈ ನಾಟಕ ತಂಡವು ಉಜಿರೆ (ಮೇ 5) ಹಾಗೂ ಬೆಳ್ತಂಗಡಿ ಪೇಟೆಯಲ್ಲಿ (ಮೇ 7) ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಸ್ಥಳೀಯ ಆಡಳಿತದ ಸಹಯೋಗದೊಂದಿಗೆ ಈ ಬೀದಿ ನಾಟಕದ ಮೂಲಕ ಸಾರ್ವಜನಿಕರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಿತ್ತು. 

 

https://belthangady.suddinews.com/archives/639787

 

https://belthangady.suddinews.com/archives/639861  

 

https://www.upayuktha.com/2023/05/Belthangady-Voting-Awareness-campaign-and-Street-play.html

 

https://nesaranewsworld.com/archives/23574
 

https://suddiudaya.com/2023/05/07/mathadara-jagruthi-andholana-kalnadige-jatha/