Admission Open | ತಂತ್ರಜ್ಞಾನದೊಂದಿಗೆ ಮೌಲ್ಯ ಶಿಕ್ಷಣವನ್ನೂ ನೀಡುತ್ತಿರುವ ಸಂಸ್ಥೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜು

SDM PU College, Ujire

news

Academics

-ಡಾ. ಪ್ರಸನ್ನ ಕುಮಾರ ಐತಾಳ್ 

 

ಶ್ರೀ ಕ್ಷೇತ್ರ ಧರ್ಮಸ್ಥಳದ ಅಂದಿನ ಧರ್ಮಾಧಿಕಾರಿ ಪೂಜ್ಯ ಶ್ರೀ ಡಿ. ರತ್ನವರ್ಮ ಹೆಗ್ಗಡೆ ಅವರಿಂದ ಸ್ಥಾಪಿಸಲ್ಪಟ್ಟು, ಪ್ರಸ್ತುತ ಧರ್ಮಾಧಿಕಾರಿ ಹಾಗೂ ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಪದ್ಮವಿಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ದೂರಗಾಮಿ ಚಿಂತನೆಯಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳ ನಡುವೆ ತನ್ನದೇ ಛಾಪನ್ನು ಮೂಡಿಸಿ, ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನದೊಂದಿಗೆ ಮೌಲ್ಯ ಶಿಕ್ಷಣವನ್ನೂ ನೀಡುತ್ತಿರುವ ಶಿಕ್ಷಣ ಸಂಸ್ಥೆ ಎಂದರೆ ಅದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜು SDM PU College, Ujire.

 

ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿ SDM Educational Society ಯ ಮೂಲಕ ನಡೆಯುತ್ತಿರುವ ಈ ಕಾಲೇಜು, ಕೇವಲ ಶಿಕ್ಷಣದಿಂದ ಮಾತ್ರವಲ್ಲದೆ ಕ್ರೀಡೆ, ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕವಾಗಿಯೂ ಗುರುತಿಸಿಕೊಂಡಿರುವ ಸಂಸ್ಥೆ.

 

ಪ್ರಾಚಾರ್ಯ ಪ್ರಮೋದ್ ಕುಮಾರ್ ಇವರ ಸಮರ್ಥ ಮಾರ್ಗದರ್ಶನದಲ್ಲಿ 60 ಉಪನ್ಯಾಸಕರು ಹಾಗೂ 18 ಬೋಧಕೇತರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ವಿಜ್ಞಾನ ವಿಭಾಗದಲ್ಲಿ ಸುಮಾರು ಒಂದು ಸಾವಿರ ವಿದ್ಯಾರ್ಥಿಗಳು, ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಸುಮಾರು 800 ಹಾಗೂ ಕಲಾ ವಿಭಾಗದಲ್ಲಿ ಸುಮಾರು 250 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.    

 

2023-24ನೇ ಶೈಕ್ಷಣಿಕ ವರ್ಷದಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಹಾಜರಾದ ಒಟ್ಟು 1,065 ವಿದ್ಯಾರ್ಥಿಗಳಲ್ಲಿ 1,056 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99.15 ಫಲಿತಾಂಶ ಬಂದಿರುತ್ತದೆ. ಕಾಲೇಜಿನ ಒಟ್ಟು 11 ವಿಭಾಗಗಳು 100%  ಫಲಿತಾಂಶವನ್ನು ದಾಖಲಿಸಿವೆ. Also read (2024-25ರ ಫಲಿತಾಂಶ)

 

 

ಇಲ್ಲಿರುವ ಪಠ್ಯಕ್ರಮಗಳು ಇಂತಿವೆ: 

ವಿಜ್ಞಾನ ವಿಭಾಗ - PCMB, PCMS, PCMC.

ವಾಣಿಜ್ಯಶಾಸ್ತ್ರ ವಿಭಾಗ - BAES, BAEC. 

ಕಲಾ ವಿಭಾಗ - HEPK, HEPP.

ಭಾಷೆಗಳು - ಪ್ರಥಮ ಭಾಷೆ: ಇಂಗ್ಲಿಷ್.

ದ್ವಿತೀಯ ಭಾಷೆ : ಕನ್ನಡ, ಹಿಂದಿ ಅಥವಾ ಸಂಸ್ಕೃತ 

 

ವಿಶೇಷ ತರಬೇತಿ ಸೌಕರ್ಯಗಳು: 

  • ವಿಜ್ಞಾನದ ವಿದ್ಯಾರ್ಥಿಗಳಿಗೆ CET, NEET & JEE ಇತ್ಯಾದಿ ತರಬೇತಿ.
  • ವಾಣಿಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ CA, CS, CPT ಇತ್ಯಾದಿ ತರಬೇತಿ.
  • ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಮೌಲಿಕ ಕಲಿಕಾ ತರಬೇತಿ, ಜೀವನ ಶಿಕ್ಷಣ ಹಾಗೂ ಕ್ರೀಡಾ ತರಬೇತಿಗಳು.
  • ಒಲಿಂಪಿಯಾಡ್ Olympiad ತರಬೇತಿಗಳು.

 

ಸುಸಜ್ಜಿತ ವಸತಿ ವ್ಯವಸ್ಥೆಗಳು: 

  • ಬಾಲಕಿಯರಿಗೆ 'ಮೈತ್ರೇಯಿ' ಹಾಸ್ಟೆಲ್.
  • ಬಾಲಕರಿಗೆ ‘ಧೀಮಂತ್’ ಹಾಸ್ಟೆಲ್. 
  • ಆಯ್ದ ಬಾಲಕರಿಗೆ ಸಿದ್ಧವನ ಗುರುಕುಲದಲ್ಲಿ ಉಚಿತ ಅಶನ ಹಾಗೂ ವಸತಿ ವ್ಯವಸ್ಥೆ. 

 

ಕಾಲೇಜಿನ ವಿಶೇಷತೆಗಳು: 

  • ತಂತ್ರಜ್ಞಾನದ ಸಹಯೋಗದಲ್ಲಿ ವೈಜ್ಞಾನಿಕ ತಳಹದಿಯ ಕಲಿಕೆಯೊಂದಿಗೆ ಮೌಲ್ಯಾಧಾರಿತ ಜೀವನದ ಕಲಿಕೆ. 
  • ಕಲಿತುಕೊಳ್ಳಲು ಇಚ್ಛಿಸುವ ವಿದ್ಯಾರ್ಥಿಗಳ ಕೇಂದ್ರೀಕೃತವಾಗಿರುವ ವಾತಾವರಣ.
  • ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಗೆ ಒತ್ತು ಹಾಗೂ ಹೆಚ್ಚುವರಿ ಕಲಿಕೆಗೆ ಅವಕಾಶ. 
  • ವಿದ್ಯಾರ್ಥಿಗಳ ಕ್ರೀಡೆ, ಕಲೆ, ಸಾಹಿತ್ಯ, ಶೈಕ್ಷಣಿಕ ಕಾರ್ಯಗಳ ವಿಸ್ತರಣಾ ಚಟುವಟಿಕೆಗೆ ಉತ್ತೇಜನ. 
  • ಕಲಿಕೆಗೆ ಸಹಾಯಕವಾಗುವ ಮೂಲಭೂತ ಸೌಕರ್ಯ.
  • ಹೆಚ್ಚು ಅರ್ಹತೆ ಇರುವ ಮತ್ತು ಸಮರ್ಪಿತ ಉಪನ್ಯಾಸಕರ ಮಾರ್ಗದರ್ಶನ. 
  • ಸಕ್ರಿಯ ರಕ್ಷಕ ಶಿಕ್ಷಕ ಸಂಘ.
  • ಒಟ್ಟಾರೆ ಕ್ರಿಯಾತ್ಮಕ ಶೈಕ್ಷಣಿಕ ವಾತಾವರಣ. 

 

 

ಸಹ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಆಗರ:

  • ವೃತ್ತಿ ಮಾರ್ಗದರ್ಶನ Career Guidance 
  • ಕೌನ್ಸೆಲಿಂಗ್ Counselling 
  • ಪರಿಹಾರ ಬೋಧನೆ ಮತ್ತು ಪರೀಕ್ಷೆ Remedial Class and Exams 
  • ಕಂಪ್ಯೂಟರ್ ತರಬೇತಿ Computer training 
  • ಇಂಗ್ಲಿಷ್ ಸಂವಹನ ಕೋರ್ಸ್ Communicative English courses 
  • ಮೌಲ್ಯ ಶಿಕ್ಷಣ Value Education
  • ರಾಷ್ಟ್ರೀಯ ಸೇವಾ ಯೋಜನೆ NSS
  • ಎನ್ ಸಿ ಸಿ (ಭೂದಳ, ನೌಕಾದಳ) NCC - Army and Navy 
  • ರೋವರ್ಸ್ ಆ್ಯಂಡ್ ರೇಂಜರ್ಸ್ Rovers and Rangers
  • ರೆಡ್ ಕ್ರಾಸ್ Red Cross
  • ಕ್ರೀಡಾ ಚಟುವಟಿಕೆಗಳು Sports and Games
  • ಕಲಾಕೇಂದ್ರ (ಸಾಂಸ್ಕೃತಿಕ ಚಟುವಟಿಕೆಗಳಿಗೆ)
  • ದ್ವೈವಾರ್ಷಿಕ ಸಂಚಿಕೆ ‘ಪ್ರೇರಣಾ’ Bi Annual magzine - 'Prerana' 
  • ವಿವಿಧ ವಿಷಯವಾರು ಕ್ಲಬ್ subject wise clubs ಇತ್ಯಾದಿ ಅನೇಕ ಪ್ರತಿಭೆಗೆ ಒರೆ ಹಚ್ಚುವ ಪಠ್ಯೇತರ ವಿಭಾಗಗಳು ಇಲ್ಲಿವೆ. 

 

 

‘ಸಮ್ಯಗ್ದರ್ಶನ ಜ್ಞಾನ ಚಾರಿತ್ರಾಣಿ’ ಎಂಬ ಕಾಲೇಜಿನ ಲಾಂಛನ ವಾಕ್ಯದಂತೆ ವಿದ್ಯಾರ್ಥಿಗಳ ದರ್ಶನ,  ಜ್ಞಾನದ ಉದ್ದೀಪನ ಮಾತ್ರವಲ್ಲದೆ ನೈತಿಕ ಪ್ರಜ್ಞೆಯನ್ನು ಬೆಳಗಿಸುವ ನಿಟ್ಟಿನಲ್ಲಿ ಮಹತ್ವದ ಯೋಜನೆ ಆಗಿರುವ ಮೌಲ್ಯ ಶಿಕ್ಷಣ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ಪ್ರತಿದಿನ ತರಗತಿಯಲ್ಲಿ ಮೌಲಿಕ ಬರಹವೊಂದು ವಾಚಿಸುತ್ತಾರೆ. ಇದಲ್ಲದೆ ಅನೇಕ ನೈತಿಕತೆ ಕಥನದೊಂದಿಗೆ ನೈತಿಕ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಕೊಡಲಾಗುತ್ತಿದೆ. 

 

ವಿದ್ಯಾರ್ಥಿಗಳ ಸೃಜನಶೀಲತೆ ಕಲೆ ಹಾಗೂ ಸೂಕ್ತ ಪ್ರತಿಭೆಗಳ ವೇದಿಕೆಯಾಗಿ ದ್ವೈವಾರ್ಷಿಕ ಸಂಚಿಕೆ ‘ಪ್ರೇರಣಾ’ ಪ್ರಕಟಗೊಳ್ಳುತ್ತಿದೆ. ಕಾಲೇಜಿನ ವಿವಿಧ ವಿಭಾಗಗಳಿಂದ 17 ಪಾಕ್ಷಿಕ ಭಿತ್ತಿಪತ್ರಿಕೆಗಳು ಪ್ರಕಟವಾಗುತ್ತಿವೆ. ‘ಎಸ್ ಡಿ ಎಂ ಕಲಾವೈಭವ’ ಎನ್ನುವ ವಿದ್ಯಾರ್ಥಿಗಳ ಸಾಂಸ್ಕೃತಿಕ ತಂಡವು ರಾಜ್ಯಾದ್ಯಂತ ಅನೇಕ ಕಾರ್ಯಕ್ರಮಗಳನ್ನು ನೀಡುತ್ತಿದೆ.

 

ಈ ವರ್ಷ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ನಡೆದ ಜಿಲ್ಲಾಮಟ್ಟದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಕಾಲೇಜಿನ ತಂಡವು ಸಮಗ್ರ ತಂಡ ಪ್ರಶಸ್ತಿಯನ್ನು ಪಡೆದಿದೆ. ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಸಾತ್ವಿಕ್ ವಿ.ಜೆ. ಪ್ರಥಮ ಬಹುಮಾನ ಹಾಗೂ ಆಶುಭಾಷಣ ಸ್ಪರ್ಧೆಯಲ್ಲಿ ಸುಮೇಧಾ ಗಾಂವ್ಕರ್ ಪ್ರಥಮ ಬಹುಮಾನ ಪಡೆದಿದ್ದಾರೆ.

 

ಮಕ್ಕಳ ಜಗಲಿ ಪತ್ರಿಕೆಯವರು ಆಯೋಜಿಸಿದ ರಾಜ್ಯಮಟ್ಟದ ಕವನ ಸ್ಪರ್ಧೆಯಲ್ಲಿ ಕಾಲೇಜಿನ ವಿಜ್ಞಾನ ವಿಭಾಗದ ಪ್ರಣಮ್ಯ ಜಿ ಅವರಿಗೆ ಕವನ ಸಿರಿ ಪ್ರಶಸ್ತಿ ಲಭಿಸಿರುತ್ತದೆ. ಇವರು ಬರೆದಿರುವ ಕವನ ಸಂಕಲನ ‘ಪುಟ್ಟ ಹೆಜ್ಜೆ’ಯು ಕಾಲೇಜಿನ ವಾರ್ಷಿಕೋತ್ಸವದಂದು ಬಿಡುಗಡೆಯಾಗಿದೆ.

 

ಇನ್ನೂ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅನೇಕ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಕಾಲೇಜಿನ ವಿದ್ಯಾರ್ಥಿಗಳು ಅನೇಕ ಬಹುಮಾನಗಳನ್ನು ಪಡೆದಿದ್ದಾರೆ. 

 

 

ಕ್ರೀಡಾರಂಗದ ಸಾಧನೆಗಳು

SDM ಕ್ರೀಡಾ ಸಂಘದಲ್ಲಿ ಒಟ್ಟು 75 ವಿದ್ಯಾರ್ಥಿಗಳು ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅವರೆಲ್ಲರಿಗೂ ಉಚಿತ ಶಿಕ್ಷಣ ಹಾಗೂ ಉಚಿತ ಅಶನ ಹಾಗೂ ವಸತಿ ಸೌಲಭ್ಯ ಕಲ್ಪಿಸಲಾಗಿದೆ. 

 

2024 - 25 ರಲ್ಲಿ 27 ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ 2 ಬೆಳ್ಳಿ ಹಾಗೂ 5 ಕಂಚಿನ ಪದಕ ಪಡೆದಿದ್ದಾರೆ. 96 ವಿದ್ಯಾರ್ಥಿಗಳು ರಾಜ್ಯಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ 18 ಚಿನ್ನ, 16 ಬೆಳ್ಳಿ ಹಾಗೂ 19 ಕಂಚಿನ ಪದಕಗಳನ್ನು ಗಳಿಸಿದ್ದಾರೆ. ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲೂ ನೂರಾರು ಪದಕಗಳನ್ನು ಗಳಿಸಿದ್ದಾರೆ. 

 

ವಿಶೇಷ ಕ್ರೀಡಾ ಸಾಧಕರು

ವಿದ್ಯಾರ್ಥಿ ಕ್ರಿಸ್ ಅಂಜನ್ ಬ್ಯಾಪಿಸ್ಟ್ ಇವರು ಈ ವರ್ಷ ನಾಲ್ಕು ಅಂತಾರಾಷ್ಟ್ರೀಯ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಭಾಗವಹಿಸುತ್ತಾರೆ. ಏಳು ರಾಷ್ಟ್ರ ಮಟ್ಟದ ಪಂದ್ಯಾಟದಲ್ಲಿ ಭಾಗವಹಿಸಿ ಒಂದು ಚಿನ್ನ, ಎರಡು ಬೆಳ್ಳಿ ಪದಕಗಳನ್ನು ಗಳಿಸಿದ್ದಾರೆ. ನಾಲ್ಕು ರಾಜ್ಯಮಟ್ಟದ ಪಂದ್ಯಾಟದಲ್ಲಿ ರನ್ನರ್ ಪ್ರಶಸ್ತಿ ಪಡೆದಿದ್ದಾರೆ.

 

ಸುಸಜ್ಜಿತ ಈಜುಕೊಳ: ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಈಜು ಸ್ಪರ್ಧೆ ಏರ್ಪಡಿಸುವ ಸಾಮರ್ಥ್ಯದ ಈಜು ಕೊಳ ಇಲ್ಲಿದೆ. ಈಜು ಪಟುಗಳಿಗೆ ಇದೊಂದು ವರದಾನವಾಗಿದೆ.

 

 

 

 

 

 

ಉಪನ್ಯಾಸಕರ ಸಾಧನೆಗಳು:

 ದಕ್ಷಿಣ ಕನ್ನಡ ಪ್ರಾಂಶುಪಾಲರ ಸಂಘ,  ಆಳ್ವಾಸ್ ಕಾಲೇಜು ಮೂಡುಬಿದಿರೆ, ವಿಷಯವಾರು ಉಪನ್ಯಾಸಕರ ಸಂಘ, ದೈಹಿಕ ಶಿಕ್ಷಕರ ಸಂಘ ಇವರ ಜಂಟಿ ಆಶ್ರಯದಲ್ಲಿ ಆಳ್ವಾಸ್ ಕಾಲೇಜಿನಲ್ಲಿ ನಡೆದ ಶಿಕ್ಷಕ ದಿನಾಚರಣೆ ಪ್ರಯುಕ್ತ ಪ್ರಾಚಾರ್ಯ ಪ್ರಮೋದ್ ಕುಮಾರ್ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಹಾಗೂ ಅಲ್ಲಿ ನಡೆದ ಜಿಲ್ಲಾಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಕಾಲೇಜಿನ ಉಪನ್ಯಾಸಕಿಯರ ತಂಡವು ಪ್ರಥಮ  ಬಹುಮಾನ ಗಳಿಸಿರುತ್ತದೆ. 

 

ಮಂಗಳೂರಿನ ಶ್ರೀನಿವಾಸ ಯುನಿವರ್ಸಿಟಿ ಹಾಗೂ ಸಮೂಹ ಸಂಸ್ಥೆಗಳು ಕೊಡುವ ದಿ. ಶಾಮರಾವ್ ಸ್ಮಾರಕ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನಕುಮಾರ  ಐತಾಳ್ ಪಡೆದಿರುತ್ತಾರೆ.

 

ಅನೇಕ ವರ್ಷಗಳಿಂದ ವಿದ್ಯಾರ್ಥಿಗಳಿಗೆ ಸಿರಿ ಕನ್ನಡ ಪ್ರತಿಭಾ ಪರೀಕ್ಷೆ ನಡೆಸಿದ ಪ್ರಯುಕ್ತ ಚಿತ್ರದುರ್ಗದ ಸಿರಿಗನ್ನಡ ಬಳಗದವರು ಕನ್ನಡ ಭಾಷಾ ಉಪನ್ಯಾಸಕ ಸುಭಾಷ್ ರಾವ್ ಬೋಳೂರು ಅವರಿಗೆ ಕನ್ನಡ ಕಸ್ತೂರಿ ಪ್ರಶಸ್ತಿ ನೀಡಿದ್ದಾರೆ. 

 

ಕಾಲೇಜಿನ ಐವರು ಉಪನ್ಯಾಸಕರು ಪಿಹೆಚ್.ಡಿ. ಪದವಿ, ಏಳು ಮಂದಿ ಉಪನ್ಯಾಸಕರು ಎಂ.ಫಿಲ್ ಪದವಿ ಪಡೆದಿದ್ದಾರೆ. ಎಂಟು ಮಂದಿ ಉಪನ್ಯಾಸಕರು NET / SLET ಅರ್ಹತೆ ಹೊಂದಿದ್ದಾರೆ. ಹೆಚ್ಚಿನ ಉಪನ್ಯಾಸಕರು B.Ed ಪದವಿ ಪಡೆದವರು.

 

 

ಶೈಕ್ಷಣಿಕವಾಗಿ ಮುಂಚೂಣಿಯಲ್ಲಿರುವ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಅತ್ಯುತ್ತಮ ಶೈಕ್ಷಣಿಕ ವಾತಾವರಣವುಳ್ಳ ಹಾಗೂ KG ಇಂದ PG ವರೆಗೆ ಕಲಿಕೆಗೆ ಅವಕಾಶ ಇರುವ ಊರು ಉಜಿರೆ. ಮಂಗಳೂರು, ಪುತ್ತೂರು, ಸುಳ್ಯ, ಮೂಡುಬಿದಿರೆ ಇತ್ಯಾದಿ ಭಾಗಗಳಿಗೆ ಹತ್ತಿರವಾದ ಊರಾಗಿದ್ದು, ಚಾರ್ಮಾಡಿ ಮೂಲಕ ಚಿಕ್ಕಮಗಳೂರು ಮತ್ತಿತರ ಜಿಲ್ಲೆಗಳಿಗೆ ಸಂಪರ್ಕ ಬೆಸೆಯುವ ಹಾಗೂ ಸುಲಭ ರಸ್ತೆ ಸಂಪರ್ಕ ಪಡೆದ ಊರು ಕೂಡ ಉಜಿರೆಯಾಗಿದ್ದು, ವಿದ್ಯಾಭ್ಯಾಸದ ತುಡಿತ ಹೊಂದಿರುವ ವಿದ್ಯಾರ್ಥಿಗಳಿಗೆ ಪ್ರಶಸ್ತ ತಾಣವಾಗಿದೆ. 

 

ಈಗಾಗಲೆ 2025 ಹಾಗೂ 26ನೇ ಸಾಲಿಗೆ ಪ್ರವೇಶ ಪ್ರಾರಂಭವಾಗಿದ್ದು, ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 08256 - 237321  ಅಥವಾ 236221 ಸಂಪರ್ಕಿಸಬಹುದು. 

ಕಾಲೇಜು ವೆಬ್ಸೈಟ್ (www.sdmpucujire.in.)

ಲೊಕೇಶನ್