ದ್ವಿತೀಯ ಪಿಯುಸಿ ಫಲಿತಾಂಶ (Karnataka 2nd PUC results 2025) ಪ್ರಕಟಗೊಂಡಿದ್ದು, ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜು (SDM PU College, Ujire) ಶೇ.97.27 ಫಲಿತಾಂಶ ದಾಖಲಿಸಿದೆ. ಓರ್ವ ವಿದ್ಯಾರ್ಥಿನಿ ರಾಜ್ಯಕ್ಕೆ 5ನೇ ರ‍್ಯಾಂಕ್, ಓರ್ವ ವಿದ್ಯಾರ್ಥಿ 7ನೇ ರ‍್ಯಾಂಕ್ ಹಾಗೂ ಈರ್ವರು ವಿದ್ಯಾರ್ಥಿನಿಯರು 9ನೇ ರ‍್ಯಾಂಕ್ ಗಳಿಸಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ತುಷಾರಾ ಬಿ.ಎಸ್. 600ಕ್ಕೆ 595 ಅಂಕ ಪಡೆದು ರಾಜ್ಯಕ್ಕೆ 5ನೇ ರ‍್ಯಾಂಕ್ (ಬೆಳ್ತಂಗಡಿ ತಾಲೂಕಿಗೆ ಪ್ರಥಮ ಸ್ಥಾನ) ಹಾಗೂ ನೀತಿ ಕೆ.ಪಿ. 591 ಅಂಕ ಪಡೆದು ರಾಜ್ಯಕ್ಕೆ 9ನೇ ರ‍್ಯಾಂಕ್ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಆರ್ಯ ದಿನೇಶ್ 593 ಅಂಕ ಪಡೆದು ರಾಜ್ಯಕ್ಕೆ 7ನೇ ರ‍್ಯಾಂಕ್ ನೊಂದಿಗೆ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಕಲಾ ವಿಭಾಗದಲ್ಲಿ ಶ್ರೇಯಾ ಹೆಚ್.ಎ. 589 ಅಂಕ ಪಡೆದು ರಾಜ್ಯದಲ್ಲಿ 9ನೇ ರ‍್ಯಾಂಕ್ ನೊಂದಿಗೆ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿ | ವಿಭಾಗ | ಅಂಕ (600ಕ್ಕೆ) | ಸ್ಥಾನ (ರಾಜ್ಯಕ್ಕೆ) |
ತುಷಾರಾ ಬಿ.ಎಸ್. | ವಿಜ್ಞಾನ | 595 | 5 |
ಆರ್ಯ ದಿನೇಶ್ | ವಾಣಿಜ್ಯ | 593 | 7 |
ನೀತಿ ಕೆ.ಪಿ. | ವಿಜ್ಞಾನ | 591 | 9 |
ಶ್ರೇಯಾ ಹೆಚ್.ಎ. | ಕಲಾ | 589 | 9 |

ವಿಜ್ಞಾನ ವಿಭಾಗದಲ್ಲಿ 624 ವಿದ್ಯಾರ್ಥಿಗಳಲ್ಲಿ 606 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ.97.11 ಫಲಿತಾಂಶ ಲಭಿಸಿದೆ. 162 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 411 ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ 365 ವಿದ್ಯಾರ್ಥಿಗಳಲ್ಲಿ 357 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ. 97.80 ಫಲಿತಾಂಶ ಲಭಿಸಿದೆ. 107 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 216 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಕಲಾ ವಿಭಾಗದಲ್ಲಿ 110 ವಿದ್ಯಾರ್ಥಿಗಳಲ್ಲಿ 106 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.96.36 ಫಲಿತಾಂಶ ಲಭಿಸಿದೆ. 19 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 57 ವಿದ್ಯಾರ್ಥಿಗಳು ಪ್ರಥಮ ಸ್ಥಾನ, 23 ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯ ಪ್ರಮೋದ್ ಕುಮಾರ್ ಬಿ., ಪ್ರಾಧ್ಯಾಪಕ ವೃಂದ ಮತ್ತು ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


